Friday, 14 June 2013

ಉಡುಗೊರೆ

                                                      ಉಡುಗೊರೆ 


      ಕೂಡಿ ಬಾಳಲೆಂದೇ ಹುಟ್ಟಿದಂತಿತ್ತು   ಆ ಜೋಡಿ.
      ಕಿತ್ತು ತಿನ್ನುವ ಬಡತನದಲ್ಲೂ ಪ್ರೀತಿಯ ಶಿಖರದಲ್ಲಿದ್ದರವರು.
      ನೀರೆರೆದುಕೊಂಡ ಅವಳು ತಲೆತುಂಬ ಮಲ್ಲಿಗೆ ಮುಡಿದು ಆತನ ಬರುವಿಕೆಯನ್ನೇ ಕಾಯುತ್ತಿದ್ದಳು.
      ಆತ ಸೋತು ಬಂದಿದ್ದ ; ಅಂದಿನ ಕೂಲಿ ಸಿಗದೆ.
      ದಿನದ ಅದೇ ನೈದಿಲೆಯ ನಗೆಯೊಂದಿಗೆ ಆತನನ್ನು ಸ್ವಾಗಸಿದಳು. ಪ್ರೀತಿಯ ಅಪ್ಪುಗೆ ನೀಡಿದಳು. "ಜನ್ಮದಿನದ  ಶುಭಾಶಯಗಳು "ಆತ  ಕಿವಿಯಲ್ಲಿ ಉಸುರಿದ. ಆತನ ತುಟಿಗೆ ಹೂಮುತ್ತೊಂದನ್ನೊತ್ತಿ ಹುಟ್ಟು ಹಬ್ಬದ ಸಿಹಿಯಾಗಿ-ಕೇಳಿದಳು.
    "ಉಡುಗೊರೆ ಏನೂ ಇಲ್ವಾ? "
     'ಯಾಕಿಲ್ಲ ? ಎನ್ನುವಂತೆ ಆತ ಕೈಲಿದ್ದ ಕಾಗದವನ್ನು ಅವಳ ಕೈಲಿತ್ತ.
      ಬಿಡಿಸಿ ನೋಡಿದಳು. ಅದರಲ್ಲಿ,
     "ನಿನ್ನಿಸ್ಟದ ಆಕಾಶ ಬಣ್ಣದ ಸೀರೆ " ಎಂದು ಬರೆದಿತ್ತು!
     "ಥಾಂಕ್ಯೂ" ಎನ್ನುತ್ತಾ ಒಳ ನಡೆದ ಆಕೆ ಸ್ವಲ್ಪ ಸಮಯದ ನಂತರ ಮರಳಿ ಬಂದು, ಆತನ ಕೈಗೂ ಒಂದು ಕಾಗದ ಕೊಟ್ಟಳು.  ಅದರಲ್ಲಿ ಹೀಗೆ ಬರೆದಿತ್ತು....
     "ಹ್ಯಾಗೆ ಕಾಣಿಸ್ತಾ  ಇದ್ದೀನಿ ?"

                                                                                                        #ಎಮ್. ಎಸ್. ಶಿವಸಿಂಪಿ.  
 

No comments:

Post a Comment